ನೀರಿನ ಬೌತಿಕ ಮತ್ತು ರಾಸಾಯನಿಕ ಗುಣಗಳು ಮೀನಿನ ಬೆಳವಣಿಗೆಗೆ, ಬದುಕುಳಿಯುವಿಕೆ ಮತ್ತು ಉತ್ಪತ್ತಿಯ ಮೇಲೆ ವಿಶೇಷ ಪ್ರಭಾವವನ್ನು ಬೀರುತ್ತವೆ. ಪ್ರತಿಯಾಗಿ ನೀರಿನಲ್ಲಿ ಕರಗಿರುವ ರಾಸಾಯನಿಕ ಪದಾರ್ಥಗಳು ಮೂಲತಃ ಅದರ ತಳದ ಮಣ್ಣಿನ ಗುಣ ಧರ್ಮವನ್ನು ಅವಲಂಬಿಸಿರುತ್ತವೆ. ಮಣ್ಣು ಮತ್ತು ನೀರಿನ ನಡುವಣ ಈ ಸಂಬಂಧ ಸಾಮಾನ್ಯವಾಗಿ ರಾಸಾಯನಿಕ ಸಮತೋಲನದಲ್ಲಿ ಇರುವುದರಿಂದ, ಅವುಗಳ ಪರಸ್ಪರ ಹೊಂದಾಣಿಕೆಯಲ್ಲಿ ಆಗುವ ಯಾವುದೇ ಬದಲಾವಣೆಯು ಕೊಳೆತ ಜೈವಿಕ ಉತ್ಪನ್ನವನ್ನು ನಿರ್ಧರಿಸುತ್ತದೆ. ಆದ್ದರಿಂದ ನೀರು ಮತ್ತು ಮಣ್ಣಿನ ಭೌತಿಕ ಹಾಗೂ ರಾಸಾಯನಿಕ ಗುಣಗಳ ಬಗ್ಗೆ ಗಮನಹರಿಸುವುದು ತುಂಬಾ ಅವಶ್ಯಕ.
I.ಮಣ್ಣಿನ ಗುಣ ಧರ್ಮಗಳು
ಮೀನು ಕೊಳದ ಮಣ್ಣಿಗೆ ಸಂಬಂಧಿಸಿದ ವಿಷಯಗಳೆಂದರೆ
1)ಮಣ್ಣಿನ ರಚನಾ ಸ್ವರೂಪ
2) ರಸಸಾರ
3) “ಲಭ್ಯ” ರೂಪದ (ಕೊಳದ ಉತ್ಪಾದನೆಗೆ ಪೂರಕವಾದ) ರಂಜಕ ಮತ್ತು ರಾಸಾಯನಿಕ ಪ್ರಮಾಣ.

1) ಮಣ್ಣಿನ ರಚನಾ ಸ್ವರೂಪ : ಮಣ್ಣಿನಲ್ಲಿ ನಾವು ಮೂರು ವಿಧಗಳನ್ನು ಗುರುತಿಸಬಹುದು. ಅವುಗಳೆಂದರೆ; ಮರಳು (ಶೇ.10 ಭಾಗ ಜೇಡಿಮಣ್ಣು), ಜೇಡಿಯಂಥ ನಡುಪಾದ ಮಣ್ಣು (ಶೇ.75 ಭಾಗ ಜೇಡಿಮಣ್ಣು) & ಜೇಡಿ ಮತ್ತು ಮರಳಿನ ಮಿಶ್ರಣ ಪೂರಿತ (ಶೇ 30-40 ಜೇಡಿಮಣ್ಣು).
ಮೀನು ಸಾಕಾಣಿಕೆ ಜೇಡಿ ಮತ್ತು ಮರಳುಪೂರಿತ ಮಣ್ಣು ಹೊಂದಿರುವ ಕೊಳಗಳು ಯೋಗ್ಯ. ಏಕೆಂದರೆ, ಈ ರೀತಿಯ ಮಣ್ಣು ಕೊಳದ ನೀರು ಸುಲಭವಾಗಿ ಬಸಿದು ಹೋಗದೆ ಹಿಡಿದಿಟ್ಟುಕೊಳ್ಳುವ ಸಾಮರ್ಥ್ಯ ಹೊಂದಿರುತ್ತವೆ ಇಂತಹ ಮಣ್ಣಿನಲ್ಲಿ ಜೈವಿಕ ಮೂಲಗಳಲ್ಲಿನ ಖನಿಜ ಪದಾರ್ಥಗಳು ಸುಲಭವಾಗಿ ಕರಗಿ ನೀರಿನಲ್ಲಿ ಬೆರೆತು ಒಂದಾಗಲು ಸಮರ್ಥವಾಗಿರುತ್ತದೆ. ಆದರೆ ಒಂದು ವೇಳೆ ಕೊಳದ ಮಣ್ಣು, ಜೆಡಿ ಅಥವಾ ಮರಳು ಮಣ್ಣಾಗಿದ್ದ ಪಕ್ಷದಲ್ಲಿ ಇಂತಹ ಸಾಮರ್ಥ್ಯ ತೋರದೆ ಸಾಕಾಣಿಕೆಗೆ ಅಸಮರ್ಥವಾಗಿರುತ್ತದೆ ಹಾಗೂ ಇಂತಹ ಮಣ್ಣಿನಲ್ಲಿ ಜೈವಿಕ ಪದಾರ್ಥಗಳು ಸುಲಭವಾಗಿ ವಿಭಜನೆಗೊಳ್ಳದೆ ಪೌಷ್ಟಿಕಾಂಶಗಳ ಲಭ್ಯತೆಯ ಮೇಲೆ ದುಷ್ಪರಿಣಾಮ ಉಂಟು ಮಾಡುತ್ತವೆ.
2) ರಸಸಾರ: ಇದು ಕೊಳದ ಉತ್ಪತ್ತಿಯನ್ನು ನಿಯಂತ್ರಿಸುವ ಪ್ರಮುಖ ಅಂಶಗಳಲ್ಲಿ ಒಂದು. ಮೀನು ಸಾಕಾಣಿಕೆಗೆ ಬಳಸುವ ನೀರು ಆಮ್ಲತೆಯನ್ನಾಗಲೀ ಅಥವಾ ಪ್ರತ್ಯಾಮ್ಲತೆಯನ್ನಾಗಲೀ ಹೊಂದಿರದೆ, ತಟಸ್ಥ ಮೌಲ್ಯವನ್ನು ಹೊಂದಿರಬೇಕು. ಒಂದು ವೇಳೆ ಪ್ರತ್ಯಾಮ್ಲತೆಯ ಅಂಶ ಸ್ವಲ್ಪ ಜಾಸ್ತಿ ಇದ್ದರೂ ಪರವಾಗಿಲ್ಲ, ಆದರೆ ಆಮ್ಲತೆಯ ಗುಣ ಹಾನಿಕಾರಕ, ಏಕೆಂದರೆ ಆಮ್ಲತೆಯ ವಾತಾವರಣದಲ್ಲಿ ಖನಿಜಾಂಶಗಳ ಬಿಡುಗಡೆ ಮತ್ತು ವಿಲೀನತೆ ಬಹಳ ನಿಧಾನವು ಮತ್ತು ರಂಜಕದಂತಹ ಅತ್ಯಾವಶ್ಯಕ ಪೌಷ್ಟಿಕಾಂಶಗಳು ಅಲ್ಯೂಮಿನಿಯಂ ಮತ್ತು ಕಬ್ಬಿಣದ ಪಾಸ್ಪೇಟ್ ಆಗಿ ಪರಿವರ್ತನೆಗೊಂಡು ಕೊಳದ ಉತ್ಪಾದನೆಗೆ ದೊರಕುವುದಿಲ್ಲ. ಇದೇ ರೀತಿ ಪ್ರತ್ಯಾಮ್ಲತೆಯ ವಾತಾವರಣದಲ್ಲಿ ರಂಜಕವು ರಂಜಕದ ಪಾಸ್ಪೇಟ್ ಆಗಿ ಪರಿವರ್ತನೆ ಹೊಂದಿ ನಿಧಾನವಾಗಿ ಅದು ಕೊಳದ ಉತ್ಪತ್ತಿಗೆ ಪೂರೈಸಲ್ಪಡುತ್ತದೆ. ಆದ್ದರಿಂದ, ಮಣ್ಣಿನ ಕ್ಯಾಲ್ಸಿಯಂ ಮತ್ತು ಇಂಗಾಲ ಆಮ್ಲದ ಪ್ರಮಾಣವು ಪಿ.ಎಚ್. ಪ್ರಮಾಣವನ್ನು ನಿರ್ಧರಿಸುವಂತವುಗಳಾಗಿವೆ.
3) “ಲಭ್ಯ” ರೂಪ ರಂಜಕ : ರಂಜಕವು “ಲಭ್ಯ” ಮತ್ತು “ಅಲಭ್ಯ” ರೂಪಗಳಲ್ಲಿ ಕಂಡು ಬರುತ್ತದೆ. ಇವುಗಳಲ್ಲಿ “ಲಭ್ಯ” ರೂಪದ ರಂಜಕ ಮಾತ್ರ ಇಲ್ಲಿ ಪ್ರಯೋಜನಕಾರಿ. ರಂಜಕದ ಲಭ್ಯತೆಯು ಮಣ್ಣಿನ ರಚನಾ ಸ್ವರೂಪ, ಅದರ ಪಿ.ಎಚ್. ಅಂಶ ಮತ್ತು ಆಮ್ಲಜನಕದ ವಹಿವಾಟಿನೊಂದಿಗೆ ಜರುಗುವ ರಾಸಾಯನಿಕ ಕ್ರಿಯೆಗಳನ್ನು ಅವಲಂಬಿಸಿದೆ. ಯಾವ ಮಣ್ಣಿನಲ್ಲಿ ರಂಜಕದ ಪ್ರಮಾಣವು 15 ಪಿ.ಪಿ.ಎಂ. ಗಿಂತಲೂ ಅಧಿಕವಾಗಿ ದೊರೆಯುತ್ತದೆಯೋ ಆ ಮಣ್ಣು ಸಾಕಾಣಿಕೆಗೆ ಯೋಗ್ಯವೆಂದು ತಿಳಿಯಬಹುದು.
4) “ಲಭ್ಯ” ರೂಪದ ಸಾರಜನಕ : ಇದು ಸಹ ಅತ್ಯಾವಶ್ಯಕ ಪೌಷ್ಟಿಕಾಂಶಗಳಲ್ಲಿ ಒಂದು, ಆದರೆ ಅದರ ಕೊರತೆಯೂ ಸಾಮಾನ್ಯವಾಗಿ, ಸಮಸ್ಯೆಯಾಗಿ ಕಾಡುವುದು ಅತಿ ವಿರಳ. ಕಾರಣವಿಷ್ಟೇ ಇದರ ಬಳಕೆ ಯಾವಾಗಲು ಅಧಿಕ ಪ್ರಮಾಣದಲ್ಲಿದ್ದು, ಅದು ಹಲವು ರೂಪಗಳಲ್ಲಿ ದೊರೆಯುತ್ತದೆ. ಇವುಗಳಲ್ಲಿ ನೈಟ್ರೇಟ್ ರೂಪದ ಸಾರಜನಕ ಮಾತ್ರ ಕೊಳದ ಉತ್ಪತ್ತಿಗೆ ಸಹಾಯಕವಾಗುತ್ತದೆ. ಪ್ರಾಣಿ ಮತ್ತು ಸಸ್ಯಗಳು ಕೊಳೆಯುವ ಕ್ರಿಯೆಯ ಕೊನೆಯಲ್ಲಿ ದೊರಕುವ ರಾಸಾಯನಿಕ ವಸ್ತುವೇ ಇದಾಗಿದೆ. ಕೊಳೆಯುತ್ತಿರುವ ಸಸ್ಯ ಮತ್ತು ಪ್ರಾಣಿ ಜೀವಿಗಳು ಸಾರಜನಕದ ಪ್ರಮುಖ ಮೂಲಗಳಾಗಿದ್ದು ಮಣ್ಣಿನಲ್ಲಿ ಅದರ ಅಂಶ 40 ಮೀಟರ್ ಗ್ರಾಂ/100 ಗ್ರಾಂ ಗಿಂತಲೂ ಹೆಚ್ಚು ಇದ್ದ ಪಕ್ಷದಲ್ಲಿ ಅದು ಮೀನು ಸಾಕಾಣಿಕೆಗೆ ಯೋಗ್ಯವೆಂದು ಭಾವಿಸಬೇಕು.
5) ಜೈವಿಕ ವಸ್ತು : ಇದು ಸತ್ತು ಕೊಳೆಯುತ್ತಿರುವ ಪ್ರಾಣಿ ಮತ್ತು ಸಸ್ಯಗಳಿಂದ ದೊರೆಯುವ ಪದಾರ್ಥ. ಇದರಲ್ಲಿ ಇಂಗಾಲದ ಅಂಶವು ಸಾರಜನಕದ ಅಂಶಕ್ಕಿಂತ ಹೆಚ್ಚಿದ್ದು, ಅವುಗಳ ಅನುಪಾತವು ಸಾಮಾನ್ಯವಾಗಿ ಸ್ಥಿರ ಸ್ಥಿತಿಯಲ್ಲಿರುತ್ತದೆ. ಜೈವಿಕ ವಸ್ತುಗಳಿಂದ ಬಿಡುಗಡೆಯಾಗುವ ಖನಿಜಾಂಶಗಳು ಈ ಅನುಪಾತವನ್ನು ಹೊಂದಿಕೊಂಡಿವೆ. ತಜ್ಞರ ಪ್ರಕಾರ 8:1 ರಿಂದ 15:1 ವರೆಗೆ ಇರುವ C:N ಅನುಪಾತವು ಮೀನು ಸಾಕಾಣಿಕೆಗೆ ಯೋಗ್ಯವಾದದು.
II. ನೀರು ಮತ್ತು ಅದರ ರಾಸಾಯನಿಕ ಗುಣಧರ್ಮಗಳು.
ನೀರಿಗೆ ಸಂಬಂಧಿಸಿದಂತೆ ಕೆಲವು ರಾಸಾಯನಿಕ ಅಂಶಗಳು ಅತಿ ಮುಖ್ಯವಾದವು. ಅವುಗಳೆಂದರೆ ಆಮ್ಲ ಪ್ರತ್ಯಾಮ್ಲತೆ, ಕ್ಷಾರತೆ, ನೀರಿನಲ್ಲಿ ಕರಗಿರುವ ಆಮ್ಲಜನಕ, ಸಾರಜನಕ ಮತ್ತು ರಂಜಕ.

1) ಆಮ್ಲ ಮತ್ತು ಪ್ರತ್ಯಾಮ್ಲತೆ: ಮೀನಿನ ಕೊಳದ ನೀರು ಸ್ವಲ್ಪ ಪ್ರತ್ಯಾಮ್ಲತೆಯಿಂದ ಕೂಡಿದ್ದರೆ ಒಳ್ಳೆಯದು (ಪಿ.ಎಚ್. ಪ್ರಮಾಣ 7 ಮತ್ತು 8.5 ರ ಮಧ್ಯೆ ಇರಬೇಕು), ಒಂದು ವೇಳೆ ನೀರಿನ ಪಿ.ಎಚ್. 6 ರಿಂದ 9 ರ ವರೆಗೆ ಇದ್ದರೂ ಸಹ ಅದನ್ನು ಮೀನು ಸಾಕಾಣಿಕೆಗೆ ಉಪಯೋಗಿಸಬಹುದು. ಈ ಪಿ.ಹೆಚ್. ಅಂಶವು ನೀರಿನಲ್ಲಿ ಕರಗಿರುವ ಲವಣಾಂಶಗಳನ್ನು ಅವಲಂಬಿಸಿರುತ್ತದೆ. ಅಲ್ಲದೆ ದ್ಯುತಿ ಸಂಶ್ಲೇಷಣ ಕ್ರಿಯೆಗೆ ಅವಶ್ಯವಾದ ಇಂಗಾಲ ಆಮ್ಲದ ಲಭ್ಯತೆಯನ್ನು ಸಹ ಅದು ನಿಯಂತ್ರಿಸುತ್ತದೆ. ಮೀನಿನ ಸಂಪೂರ್ಣ ಆರೋಗ್ಯವೂ ಹೆಚ್ಚಿನಂಶ ನೀರಿನ ಪಿ.ಎಚ್. ಪ್ರಮಾಣವನ್ನು ಅವಲಂಬಿಸಿದೆ. ಕೊಳದ ಪಿ.ಎಚ್. ಅಂಶ 6 ಕಿಂತ ಕಡಿಮೆ ಇದ್ದರೆ ಮೀನುಗಳ ಆಹಾರ ಸೇವನೆಯಲ್ಲಿ ವ್ಯಕ್ತಿಯಪರಾವಲಂಬಿಗಳ ಆಕ್ರಮಣಕ್ಕೆ ತುತ್ತಾಗಿ ಸಾಯುವ ಸಂಭವವಿರುತ್ತದೆ.
2) ಕ್ಷಾರತೆ: ಇದು ನೀರಿನಲ್ಲಿ ಕರಗಿರುವ ಲವಣಗಳ ಪ್ರಮಾಣವನ್ನು ಅವಲಂಬಿಸಿದೆ. ಇದನ್ನು ಕ್ಯಾಲ್ಸಿಯಂ ಕಾರ್ಬೋನೇಟ್ ಪಿ.ಪಿ.ಎಂ. ಪ್ರಮಾಣದಲ್ಲಿ ಸೂಚಿಸಲಾಗುತ್ತದೆ. ಇದರಲ್ಲಿ ಎರಡು ವಿಧ: ಕಾರ್ಬೋನೇಟ್ ಮತ್ತು ಬೈ-ಕಾರ್ಬೋನೇಟ್. ಸಾಮಾನ್ಯವಾಗಿ ಇವು ಕ್ಯಾಲ್ಸಿಯಂ ಮತ್ತು ಮೆಗ್ನೀಷಿಯಂ ಮೂಲಗಳಿಂದ ದೊರೆಯುತ್ತವೆ (ಕ್ಯಾಲ್ಸಿಯಂ ಮೂಲ ಹೆಚ್ಚು ಸಾಮಾನ್ಯ). ಹೀಗಾಗಿ ನೀರಿನ ಲವಣಾಂಶವೂ ನೀರಿನಲ್ಲಿ ಕರಗಿರುವ ಸುಣ್ಣ ಮತ್ತು ಇಂಗಾಲವನ್ನು ಅವಲಂಬಿಸಿದೆ. ಬೈ-ಕಾರ್ಬೋನೇಟ್ ಮತ್ತು ಕಾರ್ಬೋನೇಟ್ ಲವಣಾಂಶವು ಹೆಚ್ಚಿನ ಅಂಶ ಅನುಕ್ರಮವಾಗಿ ಪಿ.ಎಚ್. ಪ್ರಮಾಣವು 7 ರಿಂದ 9 ರ ನಡುವೆ ಮತ್ತು 9.5 ರಿಂದ 10 ರ ನಡುವೆ ಕಂಡು ಬರುತ್ತವೆ. ಕ್ಷಾರತೆಯ ಪ್ರಮಾಣ 50 ಪಿ.ಪಿ.ಎಂ. ಗಿಂತ ಅಧಿಕ ಇರುವ ನೀರು ಕೊಳದ ಉತ್ಪತ್ತಿಗೆ ಹೆಚ್ಚು ಸಮಂಜಸ.
3) ನೀರಿನಲ್ಲಿ ಕರಗಿರುವ ಆಮ್ಲಜನಕ: ನೀರಿನಲ್ಲಿ ಕರಗಿರುವ ಆಮ್ಲಜನಕವು ಮೀನಿನ ಉಸಿರಾಟಕ್ಕೆ ಅತ್ಯವಶ್ಯಕ. ಅದರ ಪ್ರಮಾಣದಲ್ಲಿ ಹೆಚ್ಚಿನ ವ್ಯತ್ಯಾಸವಾದರೆ ಮೀನುಗಳ ಜೀವಕ್ಕೆ ಅಪಾಯ ಸಾವಿರಾರು ಮೀನುಗಳನ್ನು ಸಾಕಲ್ಪಡುವ ಕೊಳಗಳಲ್ಲಿ ಇದರ ಪ್ರಮಾಣವನ್ನು ಎಚ್ಚರಿಕೆಯಿಂದ ಕಾಪಾಡಿಕೊಳ್ಳುವುದು ತುಂಬಾ ಅವಶ್ಯ. ಇಲ್ಲವಾದರೆ ದಿಡೀರನೆ ಎಲ್ಲಾ ಮೀನುಗಳು ಉಸಿರಾಟದ ತೊಂದರೆಯಿಂದ ಸತ್ತು ಹೋಗುವ ಸಂಭವವಿದೆ. ಗೆಂಡೆ ಜಾತಿಗೆ ಸೇರಿರುವ ಮೀನುಗಳನ್ನು ಸಾಕುವ ಕೊಳಗಳಲ್ಲಿ ಕರಗಿದ ಆಮ್ಲಜನಕವು 5 ಪಿ.ಪಿ.ಎಂ. ಗಿಂತ ಹೆಚ್ಚಿದಲ್ಲಿ ಅವುಗಳ ಆರೋಗ್ಯ, ಬೆಳವಣಿಗೆ ಮತ್ತು ಉತ್ಪಾದನೆಗೆ ಪೂರಕವಾಗಿರುತ್ತದೆ, ಹಾಗೆಯೇ 5 ಪಿ.ಪಿ.ಎಂ. ಗಿಂತ ಕಡಿಮೆಯಾಗದಂತೆ ನಿಗಾವಹಿಸುವುದು ಅವಶ್ಯ.
ಆಮ್ಲಜನಕದ ಪ್ರಮಾಣವು ಸಾಮಾನ್ಯವಾಗಿ ಮುಂಜಾವಿನ ಮತ್ತು ಸಂಜೆಯ ಹೊತ್ತಿನಲ್ಲಿ ಕಡಿಮೆ ಪ್ರಮಾಣದಲ್ಲಿ ಕಂಡುಬರುವ ಸಂಭವವಿರುತ್ತದೆ. ಈ ಸಂದರ್ಭಗಳಲ್ಲಿ ನೀರಿಗೆ ಗಾಳಿಯನ್ನು ತುಂಬುವ ಯಂತ್ರಗಳನ್ನಾಗಲಿ, ಇಲ್ಲವೇ ಯಾವುದರಿಂದಲಾದರೂ ನೀರನ್ನು ಕದಡುವುದರಿಂದಲೂ ಈ ಸಮಸ್ಯೆಯನ್ನು ಹೋಗಲಾಡಿಸಬಹುದು. ಒಂದು ವೇಳೆ ಆಮ್ಲಜನಕದ ಪ್ರಮಾಣ ಜಾಸ್ತಿ ಆದರೂ ಸಹ ಅದು ಮೀನುಗಳ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ. ಹೆಚ್ಚಾದ ಆಮ್ಲಜನಕವು ಸಾಮಾನ್ಯವಾಗಿ ಚಿಕ್ಕ ಮೀನುಗಳ ಮೇಲೆ ದುಷ್ಪರಿಣಾಮ ಬೀರಿ “ಗಾಳಿಗುಳ್ಳೆ” ಯ ರೋಗಕ್ಕೆ ಬಲಿಯಾಗುತ್ತವೆ.
4) ಸಾರಜನಕ : ಇದು ಸಾರಜನಕದ ಮೂಲ ವಸ್ತುವಾಗಿದೆ. ಸಾರಜನಕವು ಹಲವು ರೂಪಗಳಲ್ಲಿ ಕಂಡು ಬರುತ್ತದೆ. ಉದಾಹರಣೆಗೆ: ನೈಟ್ರೇಟ್ ,ಯೂರಿಯಾ ಮತ್ತು ಅಮೋನಿಯ. ಅಮೋನಿಯವು ಮೀನುಗಳು ವಿಸರ್ಜಿಸಲ್ಪಡುವ ಅನುಪಯುಕ್ತ ವಸ್ತು (ದೇಹದಿಂದ ವಿಸರ್ಜಿಸಲ್ಪಡುವ ಸಾರಜನಕ ಯುಕ್ತ ವಸ್ತುಗಳಲ್ಲಿ ಅಮೋನಿಯವು ಶೇ.90 ಭಾಗದಷ್ಟಿರುತ್ತದೆ). ಜೈವಿಕ ಉತ್ಪನ್ನಕ್ಕೆ ನೈಟ್ರೇಟ್ ರೂಪದ ಸಾರಜನಕ ಮಾತ್ರ ಬಳಕೆಯಾಗುತ್ತದೆ. ಅಮೋನಿಯಾ ರೂಪದಲ್ಲಿ ಶೇಖರ ವಾಗುವ ಸಾರಜನಕವು ಮೀನಿನ ಆರೋಗ್ಯಕ್ಕೆ ಅಪಾಯ.
ಸಾಮಾನ್ಯವಾಗಿ ಯಾವ ಕೊಳದ ಮಣ್ಣಿನಲ್ಲಿ ಜೈವಿಕ ವಸ್ತುವಿನ ಅಂಶ ಜಾಸ್ತಿ ಇದೆಯೋ ಅಲ್ಲಿ ಸಾರಜನಕದ ಕೊರತೆಯೇ ಇರುವುದಿಲ್ಲ. ಅಲ್ಲದೆ, ಪಾಚಿ ಅಂತ ಕೆಲವು ಸೂಕ್ಷ್ಮಜೀವಿಗಳು ಬ್ಯಾಕ್ಟೀರಿಯಾಗಳು ಶೇಖರಿಸುವ ಸಾರಜನಕ ಮತ್ತು ಗುಡುಗು, ಸಿಡಿಲುಗಳಿಂದ ಕೂಡಿದ ಮಳೆಯ ನೀರು (ಇದರಲ್ಲಿ ವಾತಾವರಣದ ಸಾರಜನಕ ಕರಗಿರುತ್ತದೆ), ಮುಂತಾದವು ಕೊಳದ ಸಾರಜನಕ ಪ್ರಮಾಣ ಹೆಚ್ಚಿಸುವಲ್ಲಿ ಸಹಕಾರಿಯಾಗುವ ಇತರೆ ಮೂಲಗಳು. ಹೀಗಾಗಿ ರಂಜಕದ ಅವಶ್ಯಕತೆಗೆ ಹೋಲಿಸಿದರೆ, ಸಾರಜನಕವನ್ನು ಗೊಬ್ಬರ ರೂಪದಲ್ಲಿ ಕೊಡಬೇಕಾದ ಅನಿವಾರ್ಯತೆ ಕಂಡು ಬರುವುದಿಲ್ಲ. ನೈಟ್ರೇಟ್ ಪೂರೈಕೆ 2-3 ಗ್ರಾಂ/ಲೀಟರ್ ಪ್ರಮಾಣದಲ್ಲಿ ಇದೆಯಾದರೆ ಅದು ಉತ್ತಮವೇ ಸರಿ.
5) ರಂಜಕ : ಜೈವಿಕ ಉತ್ಪಾದನೆಯ ದೃಷ್ಟಿಯಲ್ಲಿ, ರಂಜಕದ ಪಾತ್ರ ಅತಿ ಮುಖ್ಯವೆಂದೇ ಹೇಳಬೇಕು. ಏಕೆಂದರೆ ನೈಸರ್ಗಿಕವಾಗಿ ದೊರಕುವ ಅದರ ಪ್ರಮಾಣ ಅತೀ ಕಡಿಮೆ. ಅಲ್ಲದೆ ಚಿಗುಟು ಮಣ್ಣು, ಹೆಚ್ಚು ಕ್ಷಾರತೆ ಮತ್ತು ಹೆಚ್ಚು ಆಮ್ಲತೆಯುಳ್ಳ ಕೊಳಗಳಲ್ಲಿ ಸಾರಜನಕ ಶೇಖರವಾಗುವುದನ್ನು ನೇರವಾಗಿ ನಿಯಂತ್ರಿಸುತ್ತದೆ.
ಮಣ್ಣು ಮತ್ತು ನೀರಿನಲ್ಲಿ ಕಂಡುಬರುವ ಹೆಚ್ಚಿನಂಶ ರಂಜಕವು (ಶೇ.90 ಭಾಗದಷ್ಟು) ರಾಸಾಯನಿಕವಾಗಿ ಬಂಧಿಯಾಗಿದ್ದು ಕೊಳದ ಉತ್ಪತ್ತಿಗೆ ಅಲಭ್ಯ ರೂಪದಲ್ಲಿ ಇದೆ. ಹೀಗಾಗಿ ರಂಜಕದ ಗೊಬ್ಬರವನ್ನು ನೀರಿಗೆ ಬೆರೆಸಿ ಬಳಸುವುದರಿಂದ ಉತ್ತಮ ಉತ್ಪಾದನೆಯನ್ನು ಹೊಂದಬಹುದು. ರಂಜಕವು, ಸಾರಜನಕದ ಯಾವ ಪ್ರಮಾಣದಲ್ಲಿ ಬೆರೆಸಬೇಕೆನ್ನುವುದು ಮತ್ತೊಂದು ಮುಖ್ಯವಾದ ಅಂಶ. ಸಾಮಾನ್ಯವಾಗಿ ರಂಜಕ ಮತ್ತು ಸಾರಜನಕವು 1:4 ಅಥವಾ 1:8 ಅನುಪಾತಗಳಲ್ಲಿ ಬೆರೆಸಿ ಬಳಸಿದರೆ ಉತ್ತಮ. 0.1 ರಿಂದ 0.2 ಗ್ರಾಂ/ಲೀ ಸಾಂದ್ರತೆಯಲ್ಲಿ ರಂಜಕ ಬಳಸುವುದರಿಂದ ಉತ್ತಮ ಮೀನು ಬೆಳವಣಿಗೆ ಸಾಧ್ಯ.
ಹೀಗಾಗಿ ಯಾವುದೇ ಕೆರೆ, ಕೊಳ, ಕುಂಟೆಗಳನ್ನು ಮೀನು ಸಾಕಣೆಗೆ ಒಳಪಡಿಸುವ ಮುನ್ನ ಮೇಲೆ ತಿಳಿಸಿದ ವಿಷಯಗಳ ಬಗ್ಗೆ ಮಾಹಿತಿ ಪಡೆಯುವುದು ಸೂಕ್ತ. ಹೀಗೆ ಮಾಡಿದ್ದಾರೆ,
- ಕೊಳದ ನೈಸರ್ಗಿಕ ಗೊಬ್ಬರ ಮತ್ತು ಕೊಳಕ್ಕೆ ಬೆರೆಸಲ್ಪಡುವ ಗೊಬ್ಬರಗಳ ಸಂಪೂರ್ಣ ಬಳಕೆ ಸಾಧ್ಯ.
- ಉತ್ಪಾದನೆಯ ಮೇಲೆ ನೇರ ಹತೋಟಿ ತೋರುವ, ಅನೇಕ ರಾಸಾಯನಿಕ ಅಂಶಗಳನ್ನು ನಮ್ಮ ಅನುಕೂಲಕ್ಕೆ ತಕ್ಕಂತೆ ನಿರ್ವಹಿಸಿಕೊಂಡು ಹೋಗಲು ಸಾಧ್ಯ.
- ಕೊಳಕ್ಕೆ ಪೂರೈಸಲು ಕೊಡಬೇಕಾದ ಗೊಬ್ಬರ, ಮೀನಿನ ಆಹಾರ ಮುಂತಾದವುಗಳ ಗುಣಮಟ್ಟ ಮತ್ತು ಪ್ರಮಾಣವನ್ನು ಸರಿಯಾಗಿ ನಿರ್ಧರಿಸಲು ಸಾಧ್ಯ.
- ಸೂಕ್ತ ನಿರ್ವಹಣಾ ವಿಧಾನಗಳಿಂದ ಕೊಳದ ಮಾಲಿನ್ಯ ಹಾಗೂ ನೈರ್ಮಲ್ಯದ ಕಡೆ ವ್ಯವಸ್ಥಿತ ಗಮನ ಹರಿಸಲು ಸಾಧ್ಯ.